Sunday, September 21, 2014

ನಿನ್ನ ನಿರೀಕ್ಷೆಯಲ್ಲಿ .....

                                                 ಪ್ರೀತಿಯ ಪ್ರತಿರೂಪ                     

              " ಕಾಣದ ಕಡಲಿಗೆ ಹಂಬಲಿಸಿದೆ ಮನ"  ಅನ್ನೋ ಹಾಗೆ ನನ್ನೋಳಿಗಿನ ಅಂತರತಮ ಸರ್ವಾಂತರ್ಯಾಮಿಯಂತೆ  ನನ್ನ ನಿರೀಕ್ಷೆಯ ಹಾದಿಯಲ್ಲಿ ನಿನ್ನ ಸುಳಿವು ಹಾಯಲಿ ಎಂದು ಹಂಬಲಿಸಿದೆ. ಜಿ, ಎಸ್, ಎಸ್ ಅವರ ಮೇಲಿನ ಮಾತು ಶತ ಪರಿಶತ ಎಲ್ಲರ ಜೀವನದಲ್ಲಿ ಒಂದಲ್ಲಾ ಒಂದು ಸಲ ಅನುಭವಕ್ಕೆ ಬಂದೆ ಬರುತ್ತದೆ. ಈಗ ಅದು ನನ್ನ ಅನುಭವದ ಪರ್ಚ್ಹಾಯಿಯಾಗಿದೆ. 



   

       ಈ ನಿರೀಕ್ಷೆ ಎಂಥದ್ದು ಅಂದ್ರೆ ಗೊತ್ತಿಲ್ಲದ ದಾರಿಯಲ್ಲಿ ಶರವೇಗದಲ್ಲಿ ಚಲಿಸುವ ಕಲ್ಪನೆಗಳಿಗೆ ನಿಜಾಯಿತಿ ದೊರಕಿಸಿಕೊಟ್ಟಂತೆ, ನಮ್ಮ ಡೆಸ್ಟಿನಿ ಹುಡುಕಾಟದಲ್ಲಿ ಅಲೆಮಾರಿಯಾಗಿ, ಗೊತ್ತಿರದ ಕತ್ತಲೆಯ ಲೋಕದಲ್ಲಿ ಮಿಂಚೊಂದು ಸಂಚರಿಸಲಿ ಅನ್ನುವಂತೆ. ಅರಿಯದೆ ಯಾವುದೊ ದಾರಿಯಲ್ಲಿ ನಡೆದು ಹೋಗಿ ಸರಿಯಾದ ಗೂಡು ಸೇರಲಿ ಅನ್ನುವಂತೆ...  
ಹೂಂ ........ !!!!

        ಹೀಗೆಲ್ಲ ಏನೇನೋ ಯೋಚನೆ ಮಾಡೋ ಈ ನನ್ನ ಮನಸ್ಸಿನ ಆಳದಲ್ಲಿ ಹುದುಗಿದ ಅನಂತಾನಂತ ಭಾವನೆಗಳು, ಕಲ್ಪನೆಗಳು, ಅಸ್ಥಿರ ಚಿಂತನೆಗಳು ವಾಸ್ತವದ ಸವಿರುಚಿಯನ್ನು ಸವಿಯಲು ಹಾತೊರೆಯುತ್ತ, ಆತುರದಿಂದ ನಿನ್ನ ನಿರೀಕ್ಷೆಯ ಹಾದಿಯಲ್ಲಿ ಸಂಚರಿಸುತ್ತಿವೆ, ನಿನ್ನ ನಿರೀಕ್ಷೆಯನ್ನು ಅಪೇಕ್ಷಿಸುತ್ತಿವೆ.
    
        ನನ್ನ ಅಪರಿಮಿತ ನಿರೀಕ್ಷೆಗೆ ಕಡಿವಾಣ ಹಾಕಲು, ಮನಸ್ಸಿನ ಆಳದಲ್ಲಿ ಹುದುಗಿದ  ಭಾವನೆಗಳಿಗೆ ಸ್ಪಂದಿಸಲು,  ಸರ್ವಂತರ್ಯಾಮಿಯ ಸಂಚಾರದ ಹಾದಿಯಲ್ಲಿ ದೊರೆಕಿದೆ "ನೀ", ನ್ನನ್ನೆಲ್ಲ ಸರ್ವಸ್ವದ ಹಕ್ಕುದಾರ , ನನ್ನ ಹೃದಯದ ಒಡೆಯ. ನಿನ್ನ ಹುಡುಕಾಟದಲ್ಲಿ ನನ್ನ ಜೀವನದ ಅಲ್ಪಭಾಗ ಕಳೆದುಹೋಯ್ತು, ಇನ್ನುಳಿದ ಬಹುಭಾಗ ನಿನ್ನ ಜೊತೆ ದೀರ್ಘವಾಗಿ ಕಳೆಯಬೇಕೆಂಬ ಪುಟ್ಟ ಆಸೆ. ನಾನೆಂಥ ಭಾಗ್ಯಶಾಲಿ ನನ್ನ ಅಂತರತಮ ದಲ್ಲಿ ಅಡಗಿದ ನನ್ನವನ ಕಲ್ಪನೆಗೆ ಜೀವ ತಳೆದಂತೆ, ನೀ ಇರುವೆ, ಇದು ನನ್ನ ಅರಿವಿಗೆ ಬಂದಾಗಿನಿಂದ ನೀನು "ನನ್ನವ"ನಾಗಿಬಿಟ್ಟೆ. ನಿನಗೆ ಉತ್ಪ್ರೇಕ್ಷೆಯೂ ಕಡಿಮೆ ಬೀಳುತ್ತದೆ. ನನಗೆ ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು. ನನ್ನ ಸಂತೋಷದ ಕ್ಷಣಗಳಿಗೆ ರೆಕ್ಕೆ ಬಂದು ನಾ ಕಾಯುತ್ತಿದ್ದ ಲೋಕದಲ್ಲಿ ಸ್ವಚ್ಛಂಧವಾಗಿ, ಗರಿಬಿಚ್ಚಿ ನೀರಾಳವಾಗಿ ಹಾರುತ್ತಿವೆ. 

        ನಿನ್ನ ನಾ ನೋಡಿದಾಗಿನಿಂದ ನನ್ನ ಮನಸ್ಸು ನನ್ನ ಹತೋಟಿಯ ಸಂಕೋಲೆಯಿಂದ ಇಣುಕಿ ನೋಡುತ್ತಿದೆ, ಕ್ಷಣ ಕ್ಷಣಕ್ಕು ನಿನ್ನ ಮುದ್ದು ಮುಖ ನನ್ನ ಕಣ್ಮುಂದೆ ಬಂದು ನನ್ನನ್ನು ವಿಚಲಿತನನ್ನಾಗಿ ಮಾಡುತ್ತಿದೆ. ನಾ ಕುಳಿತ ಜಾಗದಲ್ಲಿ ಅಕ್ಕ ಪಕ್ಕ ನೀ ಬಂದ ಹಾಗೆ ಭಾಸ, ನನ್ನುಸಿರಿನ  ಗಾಳಿಯಲ್ಲಿ ನೀ ಹಾಸಿಹೊಕ್ಕಂತ ಅನುಭವ, ನನಗೆ ತಿಳಿಯದೆ ನನ್ನ ಕೂಡಿದ ತುಟಿಗಳು ಅರಳುತ್ತವೆ, ಮುಖದ ಭಾವ ನಿನ್ನ ನೆನೆದಾಗಲೆಲ್ಲ ಖಳೆ ಹೊಮ್ಮುತ್ತದೆ, ಕೆನ್ನಯ ಮಧ್ಯ ನಸುನಗೆಯ ಕುಳಿ ಉಂಟಾಗುತ್ತದೆ, ಮುಂಗುರುಳು ಕಣ್ಣಂಚಲ್ಲಿ ಮರಯಾಗುತ್ತವೆ, ಹೃದಯ ಹಗುರಾಗಿ ತೇಲುತ್ತದೆ. :)

         ಇದೆಂಥ ಅದ್ಭುತ ಅನುಭವ..!!! ಹಾಸುಗಲ್ಲಿಗೊಂದು ಜೀವ ಬಂದಂತೆ, ಉರಿಬಿಸಿಲು ತಂಪನೆಯ ತಂಗಾಳಿ ಸೂಸಿದಂತೆ, ಚಿರ್ರೊ-ಬರ್ರೊ ಅನ್ನೋ ಕರ್ಕಶ ಶಬ್ದ ಕಿವಿಗೆ ಇಂಪಾಗಿ ಕೇಳಿದಂತೆ, ನಡು ಬಿಸಿಲಿನ ಸೂರ್ಯ ನನ್ನನೋಡಿ ನಸುನಕ್ಕಂತೆ, ಇರುಳ ಚಂದ್ರ ತನ್ನಲ್ಲಿಗೆ ನನ್ನ ಕರೆದಂತೆ, ಈ ಎಲ್ಲ ಅಂತೆ- ಕಂತೆಗಳು ನನ್ನ ಮನಸ್ಸಲ್ಲಿ ನಿನ್ನ ಇರುವಿಕೆಯನ್ನು ಒತ್ತಿ ಹೇಳುತ್ತಿವೆ.... !!

        ನಿನ್ನ ಅಪೇಕ್ಷಿತ ನಿರೀಕ್ಷೆಯ ಹಬೆಯಲ್ಲಿ ಬೇಯಿತ್ತಿರುವೆ  ನಾನು, ಆದ್ರೆ ಅಷ್ಟು ಸುಲಭದಲ್ಲಿ ಈ ನಿರೀಕ್ಷೆ ಮುಗಿಯುದಿಲ್ಲ, ಎಲ್ಲಕ್ಕೂ ಕಾಲ ಕುಡಿ ಬರಬೇಕು. ನನ್ನ ಜೀವನವೇ ಚಿತ್ರ-ವಿಚಿತ್ರಗಳ , ಶೇಷ- ವಿಶೇಷಗಳ ಆಗರ. ನೀ ನನಗೆ ದೊರಕಿರುವುದು ಒಂದು ಮಿರಾಕಲ್ಲೇ ಸರಿ, ಈ ವಿಶ್ವದ ಯಾವುದೊ ಒಂದು ಅಭಿನಾವ ಜಾಗದಲ್ಲಿ ಇರುವ ನೀನು ನನ್ನ ಮನಸ್ಸಿನ ಜಾಲದಲ್ಲಿ ಸಿಲುಕಿಕೊಂಡು ಬಿಟ್ಟೆ, ನಿನ್ನ ನಾ ಹೊರಬಿಡುವ ಮಾತೆ ಇಲ್ಲ. :D 

       ಅದು ಏನೋ ತಿಳಿಯುತ್ತಿಲ್ಲ, ನಿನ್ನ ಜೊತೆ ಮಾತಾಡಬೇಕು,ನಗಬೇಕು, ನನ್ನ ದಿನಚರಿ ನಿನ್ನ್ಮುಂದೆ ಹೇಳ್ಬೇಕು, ಚಿರು ಮಳೆಯ ಹನಿಗಳಲ್ಲಿ ನಿನ್ನ ಜೊತೆ ನೆನಿಬೇಕು, ತಂಪನೆಯ ತಂಗಾಳಿಯಲ್ಲಿ ಸಂಜೆ ನಿನ್ನ ಹೆಜ್ಜಯ ಬದಿ ನನ್ನ ಹೆಜ್ಜೆ ಇಡ್ಬೇಕು, ಆ ತಂಗಾಳಿಯ ಅಲೆಗಳಿಗೆ ಸರಿದಾಡುವ ನನ್ನ ಮುಗುರಳನ್ನ ನೀ ತಿಡ್ಬೇಕು, ಇನ್ನು ಅದೇನೇನೋ ಹುಚ್ಚು ಆಸೆಗಳು, ಈ ಹುಚ್ಚು ಕೆಲವೊಮ್ಮೆ ಅತಿರೇಕ ಅನಿಸುತ್ತದೆ ಆದ್ರೆ ಅದೇನೋ ಖುಷಿ, ರೋಮಾಂಚನ,ಸ್ಪಂದನ ಈ ಹುಚ್ಛುತನದಲ್ಲಿ. ನನಗೂ  ಗೊತ್ತು ಈ ಫೀಲಿಂಗ್ಸ್ ಎಲ್ಲ ಅನುಭವಕ್ಕೆ ಬರಲು ಸರಿಯಾದ ಸಮಯ ಮುಂದೆ ಇದೆ, ಆ ಅದ್ಭುತ ಕ್ಷಣಕ್ಕಾಗಿ ಎದುರು ನೋಡೋಣ, ಕಾಯೋಣ ಅಂತ, ಆದ್ರೆ ಈ ಹರೆಯದ ಮನಸ್ಸು ಕಾಲದ ಕುದುರೆ ಏರಿ ಶರವೇಗದಲ್ಲಿ ಸಾಗುತ್ತಿದೆ. ಈ ಎಲ್ಲ ಫೀಲಿಂಗ್ಸ್ ಅನುಭವಕ್ಕೆ ಬರುವತನಕ ಇದಕ್ಕೆ ಒಂದು ಮೂಗುದಾರ, ಕಡಿವಾಣ ಬೇಕು, ಆ ಕಡಿವಾಣ ಸದಾಕಾಲ ನನ್ನ ಮನಸ್ಸಿನಲ್ಲಿ ನಿನ್ನ ಇರುವಿಕೆಯಾಗಿರಬೇಕು. 
                                        

     ಪ್ರತಿ ಅಣಿ ಕ್ಷಣಕ್ಕು ನಿನ್ನದೇ ಧ್ಯಾನ, ನಿನ್ನದೇ ಜಪ, ಇದೆಂಥ ಮೋಡಿ...!!! ಈ ಪ್ರೀತಿ, ಪ್ರೇಮ ಎಲ್ಲವು ಕಾಲದ ಪರಿಮಿತಿಗೆ ತಕ್ಕಂತೆ ಬದಲಾಗಿ ನಮ್ಮ ನಮ್ಮ ವಾಸ್ತವದ ಅನುಭವಕ್ಕೆ ಬರಿತ್ತ್ಹವೇ ಅಂತ ಹಿಂದೆಂದು ಯಾವುದೇ ಪ್ರೀತಿಯ ಬಲೆಗೆ ಬೀಳದೆ ಇದ್ದ ನನಗೆ "ಪ್ರೀತಿಯ" ಆ ಸುಂದರ ಅನುಭವ ಅಂಕುರಿಸಿ ನನ್ನ ವಾಸ್ತವದ ಪರಿಕಲ್ಪನೆಯಗತೊಡಗಿದೆ. ಪ್ರೀತಿ ಹುಟ್ಟೋಕೆ ದಿನ-ವರ್ಷ-ಯುಗಗಳು ಬೇಕಾಗಿಲ್ಲ ನಿಜವಾದ ಪ್ರೀತಿ ಹುಟ್ಟಲು ಒಂದು ಕ್ಷಣ  ಸಾಕು, ಆ ಅದ್ಭುತ ಕ್ಷಣ ನನ್ನ ಜೀವನದ ಅವಿಸ್ಮರಣೀಯ "ಕ್ಷಣ" ವಾಗಿಬಿಡ್ತು. ಇದೆಲ್ಲ ದೈವೆಚ್ಛೆ, ಮೇಲಾಗಿ ನನ್ನ ನಿನ್ನ ಋಣಾನುಬಂಧ.. 
                                           
      ಋಣಾನುಬಂಧ ಅಂದ ತಕ್ಷಣ ನಂಗೆ ನೆನಪಾಗೋದು "ಋಣಾನುಬಂಧ ರೂಪೇಣ ಪತಿ-ಪತ್ನಿ ಸುತಾಲಯ" ಈ ಮಾತಲ್ಲಿ  ನನಗೆ ಶತ ಪ್ರತಿಶತ ನಂಬಿಕೆ ಉಂಟು. ಯಾವುದೇ ಸಂಬಂಧಗಳು ಕಾರಣವಿಲ್ಲದೆ ಹುಟ್ಟುವುದಿಲ್ಲ , ಅದು ಕಾಲನಿರ್ಣಾಯಕನ ಆಟದ ಸಂಕೋಲೆಯಲ್ಲಿ ಮಿಂದು , ನಮ್ಮ-ನಮ್ಮ ಅಭಿನಾಭಾವ ಮನೋಭಾವದಲ್ಲಿ ಚಿರಸ್ಥಾಯಿಯಂತೆ ಬೆರೆತು ಹೋಗುತ್ತವೆ. ಅದೇ ನಮ್ಮನ್ನೆಲ್ಲ ಒಂದು ಬಂಧನದಲ್ಲಿ ಕೂಡಿ ಹಾಕುತ್ತದೆ. 

                                          

     ನನ್ನ ಕಾಲನಿರ್ಣಾಯಕ ತಿಳಿಸಿಯಾಯ್ತು ನೀನೆ ನನ್ನೀ ಜನ್ಮದ "ಕಲ್ಪನೆ", ನಿನ್ನೀ ಹುಟ್ಟು ನನಗಾಗಿಯೇ ಎಂದು :).
ಈ ವಿಧಿ ಮಹರಾಯ, ಕಾಲನಿರ್ಣಯಕ ಅಂತ ನಾವ್ ಏನ್  ಹೇಳ್ತಿವಿ ಅವನು ಮಾಯಜೀವಿ, ಅವನು ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲವನ್ನು ಕೊಟ್ಟು ಅದನ್ನು ನಮ್ಮದಾಗಿಸಿಕೊಳ್ಳಲು ಇನ್ನೂ ಕಾಯಿಸುತ್ತಾನೆ.

        ಹೂಂ ...!!! ನಾ ನಿನಗಾಗಿ ಪ್ರತಿದಿನ, ಪ್ರತಿಕ್ಷಣ ಕಾಯ್ತೀನಿ. ನಾ ನಿನ್ನ ಮಿಸ್ ಮಾಡಿದಷ್ಟು ಬೇರೆ ಯಾರು ಅಷ್ಟು ಮಿಸ್ ಮಾಡಿರಲಿಕ್ಕಿಲ್ಲ, ಇದು ಜಾಸ್ತಿ ಉತ್ಪ್ರೆಕ್ಷೆ ಅನ್ನಿಸಬಹುದು ಆದರೆ ಅದೇ ನಿಜ  :) ನಾ ಮುಂಚೆ ಹೇಳಿದ ಹಾಗೆ ನನ್ನ ಜೇವನದ ಅಲ್ಪಭಾಗ ನಿನ್ನ ಹುಡುಕಲು ಕಳೆದೆ, ಉಳಿದ ಬಹುಭಾಗ ನಿನ್ನ ಜೊತೆ ಕಳೆಯಬೇಕಾಗಿದೆ. ನನ್ನ ಅಪರಿಮಿತ ನಿರೀಕ್ಷೆಗೆ ಕೊನೆ ಸಿಕ್ಕಿತು, ನನ್ನೀ ಬಾಳಿನ ಅದ್ಭುತ ಕಲ್ಪನೆ ರೂಪತಳೆದಾಯ್ತು. ಇನ್ನೇನು ಹೆಚ್ಚಿನ ಅಪೇಕ್ಷೆ ಇಲ್ಲ , ನನ್ನ ಜೀವನದುದ್ದಕ್ಕೂ ಕೊನೆತನಕಾನೂ ಪ್ರೀತಿಯ ನೆರಳಲ್ಲೇ ಬದುಕಬೇಕು. ಒಲವು , ಕರುಣೆ, ಪ್ರೀತಿ , ತಾಳ್ಮೆ ಈ ಎಲ್ಲವುಗಳ ಅರ್ಥ , ಅಂದ , ಚಂದಗಳು ನಮ್ಮ ಜೀವನವನ್ನು ಅಲಂಕರಿಸಲಿವಂತಾಗಲಿ. ಬೇರೆ ಯಾವುದೇ ರೀತಿಯ ಕೆಟ್ಟ ದ್ರಷ್ಟಿ ಸೋಕದಂತಾಗಲಿ. 

     ಕೊನೆಯದಾಗಿ ಬೇಂದ್ರೆ ಯವರ ಮಾತು ಇಲ್ಲಿನ ಸಂದರ್ಭಕ್ಕೆ ತೀರ ಅರ್ಥಕೊಡುತ್ತದೆ ..... 

                                  "ಕನಸ್ಸಿನ ತೆರೆಯನ್ನು ಸರಿಸುವ ಸಂಭ್ರಮ 
                                  ಮನಸ್ಸಿನ ಮಳೆಯಲಿ ಮೀಯುವ ಸಂಭ್ರಮ 
                                  ಮೋಡದ ಮರೆಯಲಿ ಮಾತಿನ ಸಂಗಮ 

                                  ಇಳೆಯ ಮೇಲೆ ಒಲವ ಮಳೆಯ ಸಂಭ್ರಮ 
                                  ಸವಿನೆನಪುಗಳು ಚಿಗಿರುವ ಸಂಭ್ರಮ 
                                  ಚಂದ್ರನ ನೆರಳಲಿ ಮೌನದ ಸಂಗಮ 

                                  ದೂರ ತೀರದಲಿ ನಲುಮೆಯ ಸಂಭ್ರಮ 
                                  ಹೆಜ್ಜೆ ಹೆಜ್ಜೆಗೂ ಸ್ನೇಹದ ಸಂಭ್ರಮ 
                                  ಉಸಿರು ಉಸಿರಲಿ ಪ್ರೀತಿಯ ಸಂಗಮ"


                                 -------------- Live long life with 'Love', 'Grace' and 'Gratitude'.

Thursday, April 17, 2014

"ಮನಸ್ಸು" ಮುರಿಯುವ ಮುನ್ನ ....

                                                  ........ಹೆಣ್ಮನ  (ಕೇವಲ ನನಗೆ ಸಂಬಂದಿಸಿದ್ದಲ್ಲ, ಪರಿಕಲ್ಪನೆ)

                                   
          

         ಮದುವೆಯ ವಯಸ್ಸು,  
         ಹರೆಯದ ಮನಸ್ಸು,
         ಕಣ್ತುಂಬ ನೂರಾರು ಸು

                 ಹೂಂ...  ಹೀಗೆ ಮದುವೆ ಬಗ್ಗೆ  ನೂರೆಂಟು ಕನಸು ಹೊತ್ತವಳು ಶ್ರದ್ಧಾ , ಚಿಕ್ಕಂದಿನಿಂದ ಇದ್ದ ಆಸೆಗಳೆಲ್ಲ ಅಂದ್ರೆ ಒಳ್ಳೆ  ಕಾಲೇಜ್ ಅಲ್ಲಿ ಓದೋದು , ಒಳ್ಳೆ ಕಡೆ ಕೆಲಸ ಪಡ್ಕೊಲ್ಳೋದು , ಮನೆ ಕಟ್ಟೋದು ಹೀಗೆ ಇದ್ದ ಅಸೆಗಲೆನ್ನೆಲ್ಲ ಪೂರೈಸಿ ಅದ ಮೇಲೆ ಉಳಿದಿದೊಂದು ಅಸೆ "ಮದುವೆ", ಅದು ನಾ ಇಷ್ಟ ಪಟ್ಟವರ ಜೊತೆ ನಡಿಬೇಕು ಅನ್ನೋದು ಶ್ರದ್ಧಾಳದು.

               ಮದುವೆ ಅನ್ನೋದು ಹೆಣ್ಣಿನ ಬಾಳಿನ ಅತಿದೊಡ್ಡ ಮೈಲಿಗಲ್ಲು , ಈ ನಮ್ಮ IT ಯಲ್ಲಿ ಒಂದು ಪ್ರಾಜೆಕ್ಟ್ code ನ  ಹಂತ-ಹಂತವಾಗಿ ಒಂದು environment ಇಂದ ಇನ್ನೊಂದಕ್ಕೆ migrate ಮಾಡೋ ಥರ ಹೆಣ್ಣಿನ ಬದುಕು ಕೂಡ migrate ಆಗುತ್ತೆ ಈ ಮದುವೆಯ ಸುಳಿಯಲ್ಲಿ. ಇದನ್ನೆಲ್ಲಾ ಅರ್ಥ ಮಾಡ್ಕೊಂಡು, ಬಂದಿದನ್ನೆಲ್ಲ ಒಪ್ಪಕೊಂಡು ಗಂಡನ ಮನೆಗೆ ಹೋಗ್ಬೇಕು, ಆ ವಾತಾವರಣಕ್ಕೆ ಹೊಂದ್ಕೊಬೇಕು, ಎಲ್ಲವನ್ನು accept ಮಾಡ್ಕೊಬೇಕು...!!!   ಹೂಂ ಇಷ್ಟೆಲ್ಲಾ ಮದುವೆ ಅದಮೇಲೆ ನಡೆಯೋಒಂಥದ್ದು , ಆದ್ರೆ ಮದುವೆಗೆ ತಯರಾಗೋದು ಇದೀಯಲ್ಲ ಅದು ಹುಡುಗಿ ಮನಸನ್ನ ನಾನಾ ರೀತಿಯ ಅನುಭವಕ್ಕೆ ಒಳಗಾಗೊಥರ ಮಾಡಿ ಬಿಡುತ್ತೆ, ಅದೇ ತಾನೆ ಹುಟ್ಟಿದ ಹಸುಗೂಸಿನಷ್ಟೇ ಸೂಕ್ಷ್ಮವಗಿರುತ್ತೆ
 ಹುಡ್ಗಿರ ಮನಸ್ಸು , ಇಷ್ಟೆಲ್ಲಾ ಪರಿಸ್ತಿತಿಗಳನ್ನ ನೋಡಬೇಕಾಗುತ್ತೆ, ಇದನ್ನ ಎಲ್ಲ ಹುಡ್ಗುರು ಅರ್ಥ ಮಾಡ್ಕೊಳಲ್ಲ.

             ಎಷ್ಟೇ ಆಗಲಿ ಇದು "ಪುರುಷ ಪ್ರಧಾನ ಸಮಾಜ", ಮದುವೆ ಕೂಡ ಅದೇ ಥರ ಹುಡುಗನ decision ನೆ ಮುಖ್ಯ, ಹುಡಗನಿಗೆ ಹುಡುಗಿ ಇಷ್ಟ ಆದ್ರೆ ಹುಡುಗಿ sometimes ಕಷ್ಟ ಅದ್ರುನು ಹುಡ್ಗನ್ನ ಒಪ್ಪಿಕೊಬೇಕಾಗುತ್ತೆ. ಈ ಥರ ನಡೆಯೋದು ಸಹಜವಾಗಿ ಬಿಟ್ಟಿದೆ ಈ ಕಾಲಮಾನದಲ್ಲಿ. ಇಂತಹ ಕಾಲಮಾನದಲ್ಲಿ ನಿಜವಾದ ಪ್ರೀತಿ ಮಾಡೋ, "ನನ್ನವರೆಂಬ" ಜೀವವನ್ನು ತನಗಿಂತ ಹೆಚ್ಚಾಗಿ ಪ್ರೀತಿ ಮಾಡೋ ಒಳ್ಳೆಯವರು ಇರ್ತಾರೆ. ಯಾವುದೇ ಕೆಲಸದಲ್ಲಾಗಲಿ ತುಂಬಾ dedicated, ಅದೇ ಥರ ಪ್ರೀತಿ ವಿಷಯದಲ್ಲೂ ತುಂಬಾ dedicated ಮತ್ತು determined.

           ಹುಡುಗ- ಹುಡುಗಿಯ expectation ಗೆ ತಕ್ಕ ಹಾಗೆ ಇದ್ದು, ಇಬ್ಬರ ಅನಿಸಿಕೆ ಅಭಿಪ್ರಾಯಗಳು ಹೊಂದಿ , ಇಬ್ಬರ nature ಆಫ್ ಲೀವಿಂಗ್ ಒಂದೇ ಆಗಿದ್ದು, ಇಬ್ಬರ ಮಧ್ಯ ಪ್ರೀತಿ ಅಂಕುರಿಸಿಯಾಗಿದ್ದು ಕೂಡ ಯಾವುದೊ ಒಂದು ಸಿಲ್ಲಿ ಕಾರಣಕ್ಕಾಗಿ ಮನಸ್ತಾಪಗಳು ಬರುವ ಸಾಧ್ಯತೆ ಹೆಚ್ಚಾಗುತ್ತಿವೆ, ಸಂಬಂಧ ಹುಟ್ಟುವ ಮೊದಲೇ  ಈ ತರಹದ ಗೊಂದಲಗಳು ಶುರುವಾದಾಗ ಪರಸ್ಪರ ಮಾತನಾಡಿ ಸರಿಪಡಿಸಿಕೊಳ್ಳುವುದು ಉತ್ತಮ, ಅದರ ಬದಲು ನಮ್ಮದೇ assumption ಅಲ್ಲಿ ಮಿಂದು ನಾವೇ ತೀರ್ಮಾನ ತಗೋಳೋದು ನಮ್ಮ-ನಮ್ಮ ಮನಸ್ಸಿನ ತಳಹದಿಗೆ ನೋವನ್ನುಂಟು ಮಾಡುತ್ತದೆ. ಮನುಷ್ಯನ "ಸೂಪ್ಥ" ಮನಸೀಗೆ ಹರ್ಟ್ ಆದ್ರೆ ಅದನ್ನ ಸಹಿಸಿಕೊಳ್ಳೋದು ಕಷ್ಟ ಆಗುತ್ತೆ, ಆ ನೋವು ಮನುಷ್ಯನನ್ನ ಕಿಳರಿಮೆಯ ತಳಹದಿಗೆ ತಳ್ಳಿ ಬಿಡುತ್ತದೆ. ಈ ತರಹದ ವಿಷಯದಲ್ಲಿ ಹುಡುಗಿರೆ ಜಾಸ್ತಿ ಬಲಿಯಗೋದು, ಇದಕ್ಕೆ ಪರ್ಛಾಯಿಯಂತೆ ಈ ವರ್ಷ ಬಿಡುಗಡೆಯಾದ women spl ಮೂವಿ "ಕ್ವೀನ್".

        ಇಂಥದ್ದೆ situvation ಶ್ರದ್ಧಾಳ ಜೀವನದಲ್ಲಿ ನಡಿಯುತ್ತಿದೆ, ಅವಳೊಬ್ಬ ಆಶಾ ಜೀವಿ, ಪ್ರತಿ ಚಿಕ್ಕ ಪುಟ್ಟ ಖುಷಿಗೂ ಹಿಗ್ಗಿ ಹಾರುತ್ತಾಳೆ, ಜೀವನದ ಪ್ರತಿ ಕ್ಷಣವನ್ನು ಖುಷಿಯಿಂದ ಜೀವಿಸುತ್ತಾಳೆ  ಅಂತಹದರಲ್ಲಿ ಮದುವೆ ..!!!! ಈ ವಿಷಯದಲ್ಲಿ ತುಂಬಾ ಅಪೇಕ್ಷೆ ಇಟ್ಟುಕೊಂಡಿರೋಳು, ಸ್ವಲ್ಪ ಖುಷಿಗೂ ಅತಿಯಾದ ಸಂತೋಷ ಪಡೋಳು,ಕಡೆಗೂ ಆ ಸುದಿನ ಬಂದೆ ಬಿಡ್ತು , ಹೂಂ ....!!! ಮದುವೆಯ ತಯಾರಿ (ಪ್ರಿ-preparation) ಶುರುವಾಗಿತ್ತು ಹುಡುಗನ ಕಡೆಯೋರು ಬಂದು ನೋಡೋ ಶಾಸ್ತ್ರ ಎಲ್ಲ ಮುಗಿತು, ಪರಸ್ಪರ ಮಾತುಕತೆ ನಡೆಯಿತು, ಮೊದಲ ಭೇಟಿಯಲ್ಲಿ ಹುಡುಗನಿಗೆ ಅವಳು ಇಷ್ಟ ಆಗಿದ್ದಳು, ಆದ್ರೆ ಹುಡುಗನ ಸೂಪ್ತ ಮನಸ್ಸಿಗೆ ಅದು ಖಾತರಿಯಗಬೇಕಿತ್ತು, ಅದನ್ನ ಅವ್ನು ಬೇಗ ಡಿಸೈಡ್ ಮಾಡಬೇಕಿತ್ತು, ಅಷ್ಟರಲ್ಲಿ ಅವಳ ಮನಸ್ಸು ಅವನನ್ನ ತನ್ನ ಜಾಲದಲ್ಲಿ ಬಂಧಿಸಿಕೊಂಡುಬಿಟ್ಟಿತ್ತು, ಇದಕ್ಕೆ ಅವನೇ ಕಾರಣ, ಅವಳನ್ನ ಮಾತನಾಡಿಸುವ ರೀತಿ, ನೋಡುವ ನೋಟ, ಸ್ಪಂದಿಸುವ ಥರ ಎಲ್ಲವು ಅವಳನ್ನ ಅವನೊಳಗೆ ವಿಲೀನ ವಾಗುವಂತೆ ಮಾಡಿದ್ದವು. ಅವಳಿಗೆ ಅವನು ಇಷ್ಟವಾಗಿಬಿಟ್ಟಿದ್ದ.




           ಹುಡುಗಿಗೆ ಮುಂಚೆಯಿಂದ ಇಷ್ಟ ಇರೋ ಹುಡುಗ ನಿನ್ನ ಇಷ್ಟ ಪಡ್ತ್ಹಿದಿನಿ ಅಂತ ಹುಡುಗ ಹೇಳಿದಾಗ ಹುಡುಗಿಯ ಮನಸ್ಸು ಹಾಯಾಗಿ ಕುಣಿದು ಕುಪ್ಪಳಿಸುತ್ತಿರುತ್ತದೆ, ಅಚಾನಕ್ಕಾಗಿ ಹುಡುಗ ನಿನ್ನ ಒಪ್ಪಿಕೊಳ್ಳಕ್ಕೆ ಇನ್ನು ಟೈಮ್ ಬೇಕು ಅಂದಾಗ ಹಾಯಾಗಿ ಕುಣಿಯುತ್ತಿರುವ  ಮನಸ್ಸಿನ ಕಾಲು ಮುರಿದು ಹೋಗುತ್ತದೆ. ಮನಸ್ಸು ಮೂಖವಾಗಿಬಿಡುತ್ತದೆ. :(



           ತುಂಬ  reserve ಆಗಿ ಇರುವ ಶ್ರದ್ಧಾ , ಯಾರ್ದೋ ಜೊತೆಗೆ ಮೊದಲ ಭೇಟಿಯಲ್ಲಿ ತೀರ ಮಾತನಾಡದೆ ಇರುವ ಅವಳು ಅದೇನೋ ಗೊತ್ತಿಲ್ಲ ಇವನನ್ನು ನೋಡಿದಾಗಿನಿಂದ ಅವಳ ಮೂಖ ಪಕ್ಷಿಯ ಬಾಯಿಗೆ ಅಮೃತ ಬಿಂದು ಸಿಕ್ಕಂತಾಗಿದೆ,
ಅವಳಲ್ಲಿ ಒಂದು ಮ್ಯಾಜಿಕಲ್ vibration ಆಯ್ತು, ಆ ವಿಶೇಷ ರೋಮಾಂಚನ ಅವಳನ್ನು ಅವನ ಪ್ರೀತಿಯ ಪರಿಚಯಕ್ಕೆ ಕರೆದೊಯ್ಯಿತು. ಈ ಪ್ರೀತಿನೆ ಒಂಥರಾ ಅರಿಯದೆ ಹುಟ್ಟಿಬಿಡುತ್ತೆ , ನಾವು ಬಿಟ್ಟೆವು ಅಂದ್ರು ಅದು ನಮ್ಮ ಮನಸ್ಸನ್ನ ಬಿಡಲ್ಲ, ಎಲ್ಲವು khoya ,khoya  ಅನ್ನಿಸ್ಸೋಕ್ಕೆ ಶುರುವಾಗುತ್ತೆ, ಯಾವುದೊ ಅಪರಿಚಿತ ಲೋಕಕ್ಕೆ ಪರಿಚಿತವಾಗಿಬಿದಡುತ್ತೇವೆ, ಎಲ್ಲವು ಹೊಸ ಹುಟ್ಟು ಥರ, ಆ ದೇವ್ರು ಅದೇನು ಅಡಗಿಸಿದ್ದಾನೋ ಈ ಪ್ರೀತಿಯ ಮಾಯಾಜಾಲದಲ್ಲಿ, ಪ್ರತಿ ಕ್ಷಣವೂ ನವಜೀವ, ನವಭಾವ. ಹೀಗೆ ಅವಳು ಅವನ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಳು.

           ಹೀಗೆ ಶುರುವಾಗಿ, ಅರ್ಧ ದಾರಿಯಲ್ಲಿ ನಿಂತಿತ್ತು ಅವಳ ಪ್ರೀತಿಯ ಪ್ರಯಾಣ. ಯಾವುದೊ ಒಂದು (+) ve hope ಅವಳನ್ನು ಅವನ ಪ್ರೀತಿಯಲ್ಲಿ ಇರೋ ಥರ ಮಾಡಿತ್ತು, ಮುಂದಿನ ದಾರಿಯತ್ತ ಕೈ ತೋರಿಸಿತ್ತು, ಇವತ್ತೋ ನಾಳೆನೋ ಅವನಿಗೆ ಅವಳ ಪ್ರೀತಿಯ ಪರಿಚಯವಾಗುತ್ತೆ, ಅವನಿಗೂ ಅನ್ಸುತ್ತೆ ಅವಳೇ ಅವನ ಕನಸಿನ "ರಾಣಿ" ಅಂತ, ಬಕ ಪಕ್ಷಿ ಥರ ಕಾಯ್ತಿದಾಳೆ. ಈ "ಹೆಣ್ಮನ" ಮುರಿಯೋಕ್ಕೆ ಅವನಿಗೂ ಆಗಲ್ಲ ಅನ್ನೋ ಧೈರ್ಯದಿಂದ ಇದ್ದಾಳೆ.




            ಹುಡುಗಿ ಮನಸ್ಸು ತುಂಬಾ ಸೂಕ್ಷ್ಮ, ಅವಳು ತಾನಾಗಿಯೇ ಯಾವದಕ್ಕೂ ಅತಿಯಾಗಿ ಪ್ರೇರೆಪಿಸುವುದಿಲ್ಲ, ಎಲ್ಲವು ಅವಳ ಅನುಭವಕ್ಕೆ ಬಂದ ಮೇಲೇನೆ ಅವಳು ಒಪ್ಕೊಳೋದು, ಹೀಗಿರುವಾಗ ಯಾವುದೇ ಕಾರಣಕ್ಕೆ ಹುಡುಗಿನ ಕಿಳರಿಮೆಯಿಂದ ನೋಡೋದಾಗಲಿ, ನಿಮ್ಮ ಸ್ಟೇಟಸ್ ಗೆ ಸರಿಹೊಂದುತ್ತಾಳೋ ಇಲ್ವೋ ಅನ್ನೋ ದ್ವಂದ್ವ ದಲ್ಲಾಗಲಿ ಹುಡುಗಿ ಮನಸ್ಸನ ನೋಯಿಸಬೇಡಿ, ನೀವು ಇಷ್ಟ ಪಟ್ಟ ಹುಡುಗಿನ ತಿರಸ್ಕಾರ ಮಾಡಬೇಡಿ ಕಾರಣ ಈ ಜಗತ್ತಿನಲ್ಲಿ ಹೆಣ್ನಿಗಿರೋಷ್ಟು ಉತ್ಪ್ರೇಕ್ಷೆ ಬೇರೊಂದಕ್ಕಿಲ್ಲ, ವೇದ-ಪುರಾಣ ಕಾಲದಿಂದಲೂ ಗೊತ್ತು ಹೆಣ್ಣು ಜಗತ್ತಿನ ಅತ್ಯಂತ ವಿಶಿಷ್ಟ ಸೃಷ್ಟಿ ಅಂತ, ಆ ಸೃಷ್ಟಿ ಗಂಡಿನ ಜೀವನದುದ್ದಕ್ಕೂ, ಎಲಾ ಹಂತಗಳಲ್ಲು ದೃಷ್ಟಿ ಆಗಿರ್ತಾಳೆ, ಅಂತಹ ಅದ್ಬುತ ಜೀವದ "ಮನಸ್ಸಿಗೆ" ನೋವು ಮಾಡೋದು ಎಷ್ಟು ಸರಿ.

        ಈ ಪುರುಷ ಪ್ರಧಾನ ಸಮಾಜಕ್ಕೆ ನಾ ಕೇಳಿಕೊಳ್ಳೋದು ಇಷ್ಟೇ ಹೆಣ್ಣಿನ ಮನಸ್ಸು ಮುರಿಯುವ ಮುನ್ನ ನಿಮ್ಮ "ಸೂಪ್ಥ" ಮನಸ್ಸಿನಲ್ಲಿ ಸೂಕ್ಷ್ಮವಾಗಿ ಯೋಚನೆ ಮಾಡಿ, ನಮ್ಮ "ಕ್ವೀನ್" ಮೂವಿ ಥರ ನಂತರದಲ್ಲಿ ಪಶ್ಚಾತಾಪ ಪಡೊದರಲ್ಲಿ ಎಳ್ಳಷ್ಟು ಅರ್ಥ ಇರೋಲ್ಲ. So ಹುಡುಗರೆ ಹುಷಾರಾಗಿರಿ " ಮನಸ್ಸು ಮುರಿಯುವ ಮುನ್ನ"....ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ... ಆನಂತರದ ನಿಮ್ಮ ನಿರ್ಧಾರಕ್ಕೆ ಬೆಲೆ ಇಲ್ಲದ ಹಾಗೆ ಮಾಡ್ಕೋಬೇಡಿ. ನಿಮ್ಮ ಎಲ್ಲ ನಿರ್ಧಾರ ಪಕ್ವ ವಾಗಿರಲಿ ... "ಮುನ್ನ"..... !!!!
                                          

                                                   Stay Positive Always...........!!!!!!!!!! :)

Wednesday, April 9, 2014

ಕಿರು ಪರಿಚಯ .... ಸರ್ವಾಂತರ್ಯಾಮಿ

                                         ಕಿರು ಪರಿಚಯ ....

                                                                                   -ಸರ್ವಾಂತರ್ಯಾಮಿ 
 
      ಶ್ವೇತಮನ ----ನನ್ನೀ ಸ್ವಚ್ಚಂಧ ಮನದ ಆಸೆಗಳಿಗೆ, ಮಹತ್ವಾಕಾಂಕ್ಷೆಗಳಿಗೆ ಸ್ಪೂರ್ತಿ ನನ್ನನಗಲಿದ ನನ್ನ"ಅಪ್ಪ". ನನ್ನ ಸಾಮರ್ಥ್ಯಕ್ಕೆ ಬೆಲೆಕೊಟ್ಟು, ನನ್ನೊಳಗಿನ ಕಲೆ ಗುರುತಿಸಿ ನನ್ನನ್ನು ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ನನ್ನ "ಅಪ್ಪ'ನಿಗೆ ಈ ಬ್ಲಾಗ್ ಸವಿ ಅರ್ಪಣೆ.    
     ನಾನೊಬ್ಬ ಮಹತ್ವಾಕಾಂಕ್ಷಿ, ಎಲ್ಲದರಲ್ಲೂ ಜಯ ಸಾಧಿಸಬೇಕು, ಎಲ್ಲವನ್ನೂ ತಿಳಿದುಕೊಳ್ಳಬೇಕು ಎಂಬ ಆಸೆ. ಯಾವುದೇ ರೀತಿಯ ನಿರಾಶೆಯು ನನ್ನಿಂದ ದೂರ ಇರಲಿ ಅನ್ನೋದೊಂದೇ ನನ್ನ ವಿನಂತಿ "ವಿಧಿ" ಮಹರಾಯನಿಗೆ. ನನ್ನನ ನಾನು ಸರ್ವಾಂತರ್ಯಾಮಿ ಎಂದು ಕರೆದುಕೊಳ್ಳಲು ಇಷ್ಟ. ಜಾಲೀಯಾಗಿ ಲೈಫ್ ನಡೆಸಬಕೆಂನ್ದುಕೊಂಡವಳು ನಾನು, ಜೀವನದ ಪ್ರತಿ nano ಸೆಕೆಂಡ್ ಕೂಡ ವೇಸ್ಟ್ ಮಾಡದೇ ಅದರ ಖುಷಿಯನ್ನೂ ಅನುಭವಿಸಬೇಕೆಂಬ ಹಂಬಲ ಹೊಂದಿರುವ ಅಪರೂಪದ ಜೀವ ಇದು. ಈ ಅಪರೂಪದ ಜೀವಿಗೆ  ವಿಶೇಷವಾದ, ಅತಿಯಾದ ಕಲ್ಪನಾಶಕ್ತಿ ಇದೆ, ಅತಿಯಾದ ತಾಳ್ಮೆ ಇದೆ, "ನನ್ನ"ವರೆನ್ನುವ ಜೀವವನ್ನು ತನ್ನ ಜೀವಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಮನೋಭಾವ ಇದೆ. My friends use to call me as "Extraordinary Soul". ಈ ಒಂದು ಶಬ್ದ,ಪದ ನನ್ನ ಜೀವನವನ್ನು  ಸಾರ್ಥಕ ಮಾಡಿತು. ಈ ಸಾರ್ಥಕತೆಯ ಭಾವ ನನ್ನಲ್ಲಿ ಸದಾ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ. 
  ಆಶಾ ಜೀವಿಯ ಬ್ಲಾಗ್ ಗಳಿಗೆ ನಿಮ್ಮ ಸ್ವಲ್ಪ ಸಮಯ ಮೀಸಲಿಟ್ಟರೆ ಸಾಕು, ಬದುಕಿತು ಬಡ ಜೀವ ಅನ್ನೋ ಹಾಗೆ ನಾನು ಖುಷಿಯ ಕ್ಷಣದಲ್ಲಿ ಮಿಂದು ಹೋಗುತ್ತೇನೆ. Anyways ನಿಮ್ಮ ಶುಭಾ ಹಾರೈಕೆ ನನಗಿರಲಿ... :)
                                                                                --- Thanks for stopping by.

Friday, February 17, 2012

ಧೃಷ್ಟಿ ಬದಲಿಸಿಕೊ ಸೃಷ್ಟಿ ಬದಲಾದೀತು
ಹವ್ಯಾಸ ಬದಲಿಸಿಕೊ ಜೀವನ ಬದಲಾದೀತು