ಕಿರು ಪರಿಚಯ ....
-ಸರ್ವಾಂತರ್ಯಾಮಿ
ಶ್ವೇತಮನ ----ನನ್ನೀ ಸ್ವಚ್ಚಂಧ ಮನದ ಆಸೆಗಳಿಗೆ, ಮಹತ್ವಾಕಾಂಕ್ಷೆಗಳಿಗೆ ಸ್ಪೂರ್ತಿ ನನ್ನನಗಲಿದ ನನ್ನ"ಅಪ್ಪ". ನನ್ನ ಸಾಮರ್ಥ್ಯಕ್ಕೆ ಬೆಲೆಕೊಟ್ಟು, ನನ್ನೊಳಗಿನ ಕಲೆ ಗುರುತಿಸಿ ನನ್ನನ್ನು ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ನನ್ನ "ಅಪ್ಪ'ನಿಗೆ ಈ ಬ್ಲಾಗ್ ಸವಿ ಅರ್ಪಣೆ.
ನಾನೊಬ್ಬ ಮಹತ್ವಾಕಾಂಕ್ಷಿ, ಎಲ್ಲದರಲ್ಲೂ ಜಯ ಸಾಧಿಸಬೇಕು, ಎಲ್ಲವನ್ನೂ ತಿಳಿದುಕೊಳ್ಳಬೇಕು ಎಂಬ ಆಸೆ. ಯಾವುದೇ ರೀತಿಯ ನಿರಾಶೆಯು ನನ್ನಿಂದ ದೂರ ಇರಲಿ ಅನ್ನೋದೊಂದೇ ನನ್ನ ವಿನಂತಿ ಈ "ವಿಧಿ" ಮಹರಾಯನಿಗೆ. ನನ್ನನ ನಾನು ಸರ್ವಾಂತರ್ಯಾಮಿ ಎಂದು ಕರೆದುಕೊಳ್ಳಲು ಇಷ್ಟ. ಜಾಲೀಯಾಗಿ ಲೈಫ್ ನಡೆಸಬಕೆಂನ್ದುಕೊಂಡವಳು ನಾನು, ಜೀವನದ ಪ್ರತಿ nano ಸೆಕೆಂಡ್ ಕೂಡ ವೇಸ್ಟ್ ಮಾಡದೇ ಅದರ ಖುಷಿಯನ್ನೂ ಅನುಭವಿಸಬೇಕೆಂಬ ಹಂಬಲ ಹೊಂದಿರುವ ಅಪರೂಪದ ಜೀವ ಇದು. ಈ ಅಪರೂಪದ ಜೀವಿಗೆ ವಿಶೇಷವಾದ, ಅತಿಯಾದ ಕಲ್ಪನಾಶಕ್ತಿ ಇದೆ, ಅತಿಯಾದ ತಾಳ್ಮೆ ಇದೆ, "ನನ್ನ"ವರೆನ್ನುವ ಜೀವವನ್ನು ತನ್ನ ಜೀವಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಮನೋಭಾವ ಇದೆ. My friends use to call me as "Extraordinary Soul". ಈ ಒಂದು ಶಬ್ದ,ಪದ ನನ್ನ ಜೀವನವನ್ನು ಸಾರ್ಥಕ ಮಾಡಿತು. ಈ ಸಾರ್ಥಕತೆಯ ಭಾವ ನನ್ನಲ್ಲಿ ಸದಾ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ.
ಈ ಆಶಾ ಜೀವಿಯ ಬ್ಲಾಗ್ ಗಳಿಗೆ ನಿಮ್ಮ ಸ್ವಲ್ಪ ಸಮಯ ಮೀಸಲಿಟ್ಟರೆ ಸಾಕು, ಬದುಕಿತು ಬಡ ಜೀವ ಅನ್ನೋ ಹಾಗೆ ನಾನು ಖುಷಿಯ ಕ್ಷಣದಲ್ಲಿ ಮಿಂದು ಹೋಗುತ್ತೇನೆ. Anyways ನಿಮ್ಮ ಶುಭಾ ಹಾರೈಕೆ ನನಗಿರಲಿ... :)

Shubhavagali (y)
ReplyDeleteall the best gal..:) Welcome to bloggers Family..:)
ReplyDelete